Supported browser versions are Chrome , Mozilla Firefox and Internet explorer 9+

ಶ್ರೀ ಎಚ್.ಡಿ. ಕುಮಾರಸ್ವಾಮಿ

ಮಾನ್ಯ ಮುಖ್ಯಮಂತ್ರಿಗಳು

ರೈತ ಮಿತ್ರರಿಗೆ ಸ್ವಾಗತ ...

ಕೃಷಿ ಕರ್ನಾಟಕದಲ್ಲ್ಲಿಶತಮಾನಗಳ ಹಿಂದಿನಿಂದಲೂ,ಇಂದಿಗೂ ರಾಜ್ಯದ ಬಹುಪಾಲು ಜನರ ಮೂಲ ಕಸುಬು. ರಾಜ್ಯದ ಬಹುಪಾಲು ಜನರ ಜೀವನೋಪಾಯವಾಗಿ ಮುಂದುವರೆದಿರುವ ಕೃಷಿ ಕ್ಷೇತ್ರ; ನಮ್ಮ ಜನರ ಆಲೋಚನೆ ಪರಿಕಲ್ಪನೆ ಸಂಸ್ಕೃತಿ ಮತ್ತು ಆರ್ಥಿಕತೆಯ ಮೇಲೆ ಹೆಚ್ಹಿನ ಪರಿಣಾಮ ಬೀರಿದೆ. "ಕೃಷಿತೋ ನಾಸ್ತಿ ದುರ್ಭಿಕ್ಷಂ" -ನಂತೆ ನಮ್ಮ ನಾಡಿನ ರೈತಸಮುದಾಯವು ಇಂದಿಗೂ ಕೃಷಿಯ ಬಗ್ಗೆ ಜಾಗೃತವಾಗಿದ್ದು, ಕೃಷಿ ವೃತ್ತಿಯ ಬಗ್ಗೆ ಗೌರವ, ಕಾಳಜಿ ಮುಂದುವರೆದಿದೆ.

ಶ್ರೀ ಎನ್.ಹೆಚ್.ಶಿವಶಂಕರ್ ರೆಡ್ಡಿ

ಮಾನ್ಯ ಕೃಷಿ ಸಚಿವರು

ಗೌರವಾನ್ವಿತ ಸಚಿವರಾದ ಶ್ರೀ ಎನ್. ಹೆಚ್. ಶಿವಶಂಕರ್ ರೆಡ್ಡಿಯವರು ಅಂದಿನ ಅವಿಭಜಿತ ಕೋಲಾರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕಿನ ಹೆಚ್.ನಾಗಸಂದ್ರ ಗ್ರಾಮದಲ್ಲಿ ಮೂಲತಃ ಕೃಷಿ ಕುಟುಂಬದವರಾದ ಶ್ರೀ ಹನುಮಂತರೆಡ್ಡಿ ಮತ್ತು ಶ್ರೀಮತಿ ಸುಭಾಷಿಣಮ್ಮ ಅವರ ಸುಪುತ್ರನಾಗಿ ದಿನಾಂಕ 24-09-1954 ರಂದು ಜನಿಸಿದರು. ಶ್ರೀಯುತರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತನ್ನ ಹುಟ್ಟೂರಾದ ಹೆಚ್.ನಾಗಸಂದ್ರ ಗ್ರಾಮದಲ್ಲಿ ಅಭ್ಯಾಸ ಮಾಡಿ, ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ಹೆಸರಾಂತ ನ್ಯಾಷನಲ್ ಎಜುಕೇಶನ್ ಸೊಸೈಟಿಯ ನ್ಯಾಷನಲ್ ಪ್ರೌಢಶಾಲೆಯಲ್ಲಿ ಮುಗಿಸಿರುತ್ತಾರೆ. ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಗೌರೀಬಿದನೂರಿನ ಎ.ಇ.ಎಸ್ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿಯನ್ನು ಪಡೆದಿದ್ದಾರೆ.

***** ರೈತರ ಸಹಾಯವಾಣಿ ಕೇಂದ್ರ ದೂರವಾಣಿ ಸಂಖ್ಯೆ: 1800 425 3553 *****
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು / ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಸ್ಥಳ ಆಯ್ಕೆ (Counselling) ಪ್ರಕ್ರಿಯೆ .
ರಸಗೊಬ್ಬರ,ಬೀಜ ಮತ್ತು ಕೀಟನಾಶಕ ವ್ಯಾಪಾರಿಗಳ ಪರವಾನಿಗೆ ತಂತ್ರಾಶ

ರೈತ ಸಂಪರ್ಕ ಕೇಂದ್ರ

ಬೇಡಿಕೆ ಆಧಾರಿತ ಹೊಸ ಕೃಷಿ ವಿಸ್ತರಣಾ ವ್ಯವಸ್ಥೆಯಾಗಿ "ರೈತ ಮಿತ್ರ ಯೋಜನೆ" ಯನ್ನು ರಾಜ್ಯದಲ್ಲಿ 2000-01ನೇ ಸಾಲಿನಿಂದ ಅನುಷ್ಟ್ಹಾನಗೊಳಿಸಲಾಗುತ್ತಿದೆ.ಈ ಹೊಸ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿ ಹೋಬಳಿಗೆ ಒಂದರಂತೆ ಪ್ರಾರಂಭಿಸಿರುವ ಕೃಷಿ ವಿಸ್ತರಣಾ ಕೇಂದ್ರಗಳನ್ನು "ರೈತ ಸಂಪರ್ಕ ಕೇಂದ್ರಗಳು" ಎಂದು ಕರೆಯಲಾಗುತ್ತಿದೆ.ರಾಜ್ಯದಲ್ಲಿ ಪ್ರಸ್ತುತ 740ರೈತ ಸಂಪರ್ಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ.


ವೀಕ್ಷಕರ ಸಂಖ್ಯೆ : 3088251
ಜಾಲತಾಣ ನವೀಕರಣ : 03/01/2018

ಸಾವಯವ ಕೃಷಿ

ಸಾವಯವ ಕೃಷಿಯ ಒಂದು ಸಮಗ್ರ ಕೃಷಿ ಉತ್ಪಾದನಾ ನಿರ್ವಹಣ ಪದ್ಧತಿಯಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು  ಕಾಪಾಡಿಕೊಂಡು ಬರುವುದು ಹಾಗು ಪರಿಸರ ಸ್ನೇಹಿ ಜೈವಿಕ ವಿಧಾನಗಳಿಂದ ಕೀಟ ಮಾತ್ತು ರೋಗಗಳ ನಿರ್ವಹಣೆ ಕೈಗೊಂಡು ಗುಣಮಟ್ಟದ ಆಹಾರ ಉತ್ಪಾದನೆ ಕೈಗೊಳ್ಳುವ ಸುಸ್ಥಿರ ಬೇಸಾಯ ಪದ್ಧತಿ .

ಕೃಷಿ ಯಾಂತ್ರೀಕರಣ ಯೋಜನೆ

ಉತ್ಪಾದನಾ ವೆಚ್ಹ ಕಡಿಮೆ ಮಾಡುವುದು, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡುವುದು, ಉತ್ಪಾದಕತೆ ಹೆಚ್ಚಿಸುವುದು ಮತ್ತು ಕೃಷಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಕೃಷಿ ಯಾಂತ್ರೀಕರಣ ಯೋಜನೆಯ ಮುಖ್ಯ ಉದ್ಧೇಶಗಳು. ಕೃಷಿ ಇಲಾಖೆಯಲ್ಲಿ ಭೂಮಿ ಸಿದ್ಧತೆಯಿಂದ ಕೊಯ್ಲಿನವರೆಗೂ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ಒದಗಿಸಲಾಗುತ್ತಿದೆ.

ಸಾವಯವ ಕೃಷಿಗೆ ಹೆಚ್ಚಿನ ಒತ್ತು ಕೊಡಲು ಉದ್ದೇಶಿಸಿ ರಾಜ್ಯ ಸರ್ಕಾರವು 2004-05ನೇ ಸಾಲಿನಲ್ಲಿ ಸಾವಯವ ಕೃಷಿ ನೀತಿಯನ್ನು ಹೊರತರಲಾಗಿದ್ದು ನೀತಿಯಡಿ ಅನೇಕ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಅನುಷ್ಟ್ಹಾನಗೊಳಿಸಲಾಗುತ್ತಿದೆ.2013-14ನೇ ಸಾಲಿನಿಂದ ಸಾವಯವ ಗ್ರಾಮ/ಸ್ಥಳ ಯೋಜನೆಯನ್ನು ಪರಿಷ್ಕರಣಿಯೊಂದಿಗೆ "ಸಾವಯವ ಭಾಗ್ಯ" ಯೋಜನೆ ಹೆಸರಿನಡಿಯಲ್ಲಿ ಹೋಬಳಿ ಮಟ್ಟಕ್ಕೆ ವಿಸ್ತರಿಸಲಾಗುತ್ತಿದೆ .

ಕೃಷಿ ಭಾಗ್ಯ ಯೋಜನೆ

ಮಳೆಯಾಶ್ರಿತ ರೈತರ ಜೀವನಮಟ್ಟವನ್ನು ಉತ್ತಮಪಡಿಸಲು ಕೃಷಿ ಭಾಗ್ಯ ಯೋಜನೆಯನ್ನು 2014-15 ನೇ ಸಾಲಿನಿಂದ ಜಾರಿಗೊಳಿಸಲಾಗಿದೆ. ಬಿದ್ದ ಮಳೆ ನೀರನ್ನು ವ್ಯರ್ಥ ಮಾಡದೇ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ ಸಂದಿಗ್ದ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು. ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ನೀರು ಸಂಗ್ರಹಣೆಗಾಗಿ ಕೃಷಿ ಹೊಂಡ, ನೀರು ಇಂಗದಂತೆ ತಡೆಯಲು ಪಾಲಿಥೀನ್/ಪರ್ಯಾಯ ಮಾದರಿ ಹೊದಿಕೆ, ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪ್ಸೆಟ್, ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ (ಹನಿ/ತುಂತುರು ನೀರಾವರಿ) ಹಾಗೂ ಕೃಷಿ ಹೊಂಡದ ನೀರು ಆವಿಯಾಗುವುದನ್ನು ತಡೆಯಲು ಮತ್ತು ಆಕಸ್ಮಿಕ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೃಷಿ ಹೊಂಡದ ಸುತ್ತಲೂ ನೆರಳು ಪರದೆ (Shadenet) ಘಟಕಗಳಿಗೆ ಸಹಾಯಧನ ನೀಡಲಾಗುತ್ತಿದೆ. 2014-15 ನೇ ಸಾಲಿನಿಂದ ಅಗಸ್ಟ್ 2018ರ ಮಾಹೆಯವರೆಗೆ 2.23 ಲಕ್ಷ ಕೃಷಿ ಹೊಂಡಗಳು ಹಾಗೂ 2460 ಪಾಲಿಹೌಸ್/ನೆರಳು ಪರದೆ ಮನೆ ಘಟಕಗಳ ನಿರ್ಮಾಣ ಪೂರ್ಣಗೊಂಡಿದ್ದು, ಒಟ್ಟಾರೆ 2.25 ಲಕ್ಷ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದಿರುತ್ತಾರೆ.2018 -19 ನೇ ಸಾಲಿಗೆ ಅಂದಾಜು 70000 ಸಾವಿರ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲು ರೂ. 500.00 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. ಈ ಯೋಜನೆ ಪರಿಣಾಮಗಳ ಬಗ್ಗೆ ಕೃಷಿ ವಿಶ್ವ ವಿದ್ಯಾಲಯಗಳ ವಿಜ್ಞಾನಿಗಳ ಮೌಲ್ಯ ಮಾಪನದ ಪ್ರಕಾರ, ಮಳೆ ಕುಂಠಿತವಾಗಿರುವ ವರ್ಷಗಳಲ್ಲಿ, ಫಲಾನುಭವಿ ರೈತರು ಬೆಳೆಯನ್ನು ಕಾಪಾಡಿಕೊಳ್ಳುವುದಲ್ಲದೇ, ಸರಾಸರಿ ಶೇ. 50 ರಷ್ಟು ಹೆಚ್ಚುವರಿ ಇಳುವರಿ ಮತ್ತು ಆದಾಯ ಪಡೆಯಲು ಅನುಕೂಲಕರವಾಗಿದೆ.