ಬ್ರಿಜೇಶ್ ಕುಮಾರ್ ದೀಕ್ಷಿತ್
ಭಾ.ಅ.ಸೇ

ಕೃಷಿ ಆಯುಕ್ತರು,
ಕೃಷಿ ಇಲಾಖೆ
ಶೇಷಾದ್ರಿ ರಸ್ತೆ,ಕೆ.ಆರ್ ವೃತ್ತ,
ಬೆಂಗಳೂರು-೫೬೦೦೦೧, ಕರ್ನಾಟಕ
ದೂರವಾಣಿ ಸಂಖ್ಯೆ.:೦೮೦ -೨೨೨೧೨೮೦೪
E-Mail:- agricommr.kar@nic.in


ಬಿ.ವೈ.ಶ್ರೀನಿವಾಸ್
ಕೃಷಿ ನಿರ್ದೇಶಕರು,
ಕೃಷಿ ಇಲಾಖೆ
ಶೇಷಾದ್ರಿ ರಸ್ತೆ,ಕೆ.ಆರ್ ವೃತ್ತ,
ಬೆಂಗಳೂರು-೫೬೦೦೦೧, ಕರ್ನಾಟಕ
ದೂರವಾಣಿ ಸಂಖ್ಯೆ.:೦೮೦-೨೨೨೪೨೭೪೬
E-Mail:- agridir@nic.in
ಕೃಷಿ ಇಲಾಖೆ


ದೃಷ್ಟಿಕೋನ   
        
೨೦೨೦ನೇ ವರ್ಷದ ಅವಧಿಯೊಳಗೆ ಆಹಾರ ಭದ್ರತೆ ಒದಗಿಸುವುದರೊಂದಿಗೆ ಜೀವನಾಧಾರ ಬೆಂಬಲಕ್ಕಾಗಿ ಕೃಷಿಯನ್ನು ಒಂದು ಸುಸ್ಥಿರ ಮತ್ತು ಸಕ್ರಿಯ ಉದ್ದಿಮೆಯನ್ನಾಗಿ ಮಾಡುವುದೇ ಆಗಿರುತ್ತದೆ.
 
 ಗುರಿ

1. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಯಶಸ್ವಿ ಅನುಷ್ಟಾನ ಗೊಳಿಸುವುದರೊಂದಿಗೆ ರೈತರ ಆದಾಯ ಮಟ್ಟವನ್ನು ಉತ್ತಮಪಡಿಸಿ ಆಹಾರೋತ್ಪಾದನೆಯನ್ನು ಹೆಚ್ಚಿಸುವ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಯನ್ನು ೪.೫ ರಷ್ಟು ಗುರಿಯನ್ನು ಸಾಧಿಸುವುದಾಗಿದೆ.
2. ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಕಂಡು ಬಂದಿರುವ ಸವಾಲುಗಳನ್ನು ನೀಗಿಸಲು ಅವಶ್ಯಕ ಸಂಶೋಧನಾ ಫಲಿತಾಂಶಗಳನ್ನು ನೀಡುವುದು ಮತ್ತು ಪ್ರಮುಖ ಶಿಕ್ಷಣ ಅವಕಾಶಗಳನ್ನು ಒದಗಿಸುವುದು .
3. ಸುಸ್ಥಿರ ಕೃಷಿ ಅಭಿವೃದ್ಧಿಗಾಗಿ ಜಾಗತಿಕ ಪೈಪೋಟಿಗಾಗಿ ಮಾನವ ಸಂಪನ್ಮೂಲ ಅವಕಾಶಗಳನ್ನು ಕಲ್ಪಿಸುವುದು .  
4. ಸ್ವಾಭಾವಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಅವುಗಳ ನಿರಂತರ ಉಪಯೋಗವಾಗುವಂತೆ ಮಾಡುವುದು         
5. ಕೃಷಿ ಹವಾಮಾನದಲ್ಲಿ ಸಂಭವಿಸಬಹುದಾದ ಅವಗಢ ಮತ್ತು ಆಪತ್ತು ನಿರ್ವಹಣೆ ಕ್ರಮ ವಹಿಸುವುದು.

 ಉದ್ದೇಶಗಳು  
        
 1. ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದು.         
 2. ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಆಹಾರ ಭದ್ರತೆ ಒದಗಿಸುವುದು.        
 3. ಕೃಷಿ ಪರಿಕರಗಳ ನಿರ್ವಹಣೆ.        
 4. ತಂತ್ರಜ್ಞಾನ ಪ್ರಸರಣೆ ಮತ್ತು ಅಭಿವೃದ್ಧಿ.        
 5. ಕೃಷಿಯಲ್ಲಿ ಬಂಡವಾಳವನ್ನು ಉತ್ತೇಜಿಸುವುದು.        
 6. ಆಪತ್ತು ನಿರ್ವಹಣೆ.        
 7. ಯೋಜನೆಗಳ ಉಸ್ತುವಾರಿ ಮತ್ತು ಮೌಲ್ಯಮಾಪನ.